ಮೆರವಣಿಗೆ
ಇಷ್ಟು ದಿನ
ಗರ್ಭಗುಡಿಯಲ್ಲಿದ್ದ
“ಉತ್ಸವಮೂರ್ತಿಗಳು”
ಮತ್ತೆ ಅಧಿಕಾರಕ್ಕಾಗಿ
ಮೆರವಣಿಗೆ ಹೊರಟಿವೆ…
ನಿಮ್ಮ ಬೀದಿಗೂ
ಪರಿವಾರಗಳೊಂದಿಗೆ ಬರಲಿವೆ…
ನಿಮ್ಮಗಳ ಮನೆಗೂ ಬರಬಹುದು…
ವಿಶೇಷವೆಂದರೆ
ಈ ಉತ್ಸವಮೂರ್ತಿಗಳಿಗೆ
ನೀವು ಅಡ್ಡ ಬೀಳಬೇಕಿಲ್ಲ…
ಅವರೇ ನಿಮ್ಮ ಕಾಲಿಗೆರಗುತ್ತಾರೆ…
ಆದರದಿಂದ ಬರಮಾಡಿಕೊಳ್ಳಿ….
ಅವರ ಮಾತಿಗೆ ಕಿವಿಗೊಡಿ…
ಆಣೆ ಪ್ರಮಾಣಕ್ಕೆ ಮರುಳಾಗದಿರಿ…..
ನಿಮಗೆ ಸರಿ ಅನಿಸಿದ ವ್ಯಕ್ತಿಗಳನ್ನು ಆರಿಸಿ…
ಈ ಅವಕಾಶ ಮತ್ತೆ ಕೆಲವರಿಗೆ
ಸಿಗದೇ ಹೋಗಬಹುದು…
ಆಲೋಚಿಸಿ ಮತದಾನ ಮಾಡಿ…
ಆಸೆ ಆಮಿಷಕ್ಕೆ ಮರುಳಾಗದಿರಿ…
ನಮಸ್ಕಾರ…
ಹಂಪಿಯಾಜಿ