ಇಂದು ಕನ್ನಡ ವಿಶ್ವವಿದ್ಯಾಲಯಕ್ಕೆ ರೈತ ಮುಖಂಡರಾದ
ಶ್ರೀ ಜೆ.ಎಂ. ವೀರಸಂಗಯ್ಯ ಅವರು ಮಾನ್ಯ ಕುಲಪತಿಗಳ ಭೇಟಿಗೆ ಬಂದಿದ್ದರು…
ಅವರೊಂದಿಗೆ ಹೊಸಪೇಟೆ ಮತ್ತು ಹಗರಿಬೊಮ್ಮನಹಳ್ಳಿಯಿಂದ ಇಬ್ಬರು ರೈತ ಮುಖಂಡರಿದ್ದರು..
ಎಲ್ಲರೂ ‘ಹಸಿರುಶಾಲನ್ನು ಹೆಗಲ ಮೇಲೆ ಹಾಕಿದ್ದರು…ಅವರ ಮಾತುಕತೆ ಕೇಳಿ ಅವರ ಪರಿಚಯ ಮಾಡಿಕೊಂಡೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷರೆಂದು ಪರಿಚಯಿಸಿಕೊಂಡರು…
ತಕ್ಷಣ ನಾನು ನನ್ನ ಪರಿಚಯ ಮಾಡಿಕೊಂಡು…
ಯಾಜಿ ಪ್ರಕಾಶನ ಪ್ರಕಟಿಸಿರುವ ಡಾ. ಸವಿತಾ ಬಿ.ಸಿ. ಅವರ “ಹಸಿರುಶಾಲು ಬಾರುಕೋಲು” (ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಚಿಂತನೆ ಮತ್ತು ಹೋರಾಟ) ಪುಸ್ತಕ ತೋರಿಸಿದೆ.. ಅದನ್ನು ಕೈಯಲ್ಲಿ ಹಿಡಿದು ಕಣ್ಣಿಗೊತ್ತಿಕೊಂಡರು..
ನಾನು ಕಣ್ಣಗಲಿಸಿ ನೋಡುತ್ತಿದ್ದೆ… ಪುಟಗಳನ್ನು ತೆರೆದು ನೋಡುತ್ತಾ ಜೇಬಿನಿಂದ ಪರ್ಸ ತೆಗೆದು
ಎಷ್ಟು ಎಂದು ಕೇಳಿದರು…
ಪುಸ್ತಕ ಮೊನ್ನೆ ತಾನೇ ನಮ್ಮ ಕೈ ಸೇರಿದ್ದು… ಅವರೇ ಮೊದಲ ಓದುಗರು ಹಾಗಾಗಿ ಒಂದು ಮೊತ್ತವನ್ನು ಸೂಚಿಸಿದೆ.. ಖುಷಿಯಾಗಿ ನೀಡಿದರು…
ಹಾಗೆಯೇ ಮುಂದಿನ ತಿಂಗಳು ೧೧ ಮತ್ತು ೧೨ರಂದು ರಾಜ್ಯಮಟ್ಟದ ಶಿಬಿರ ಹಂಪಿಯಲ್ಲಿದೆ… ಅಂದು ಕೆಲ ಪುಸ್ತಕಗಳು ಬೇಕು ಎಂದರು…
ಸರಿ ಕಳಿಸುವುದಾಗಿ ತಿಳಿಸಿದೆ…
ಎಂ.ಡಿ.ನಂಜುಂಡಸ್ವಾಮಿ ಅವರ ಪ್ರಭಾವಳಿ ನೋಡಿ ದಂಗಾದೆ…
ಅವರೇ ಹಾಕಿ ಕೊಟ್ಟ ದಾರಿಯಲ್ಲಿ ಈಗಿನ ರೈತರು ಹೋರಾಡುತ್ತಲೇ ಇದ್ದಾರೆ… ಆದರೆ ಅವರ ಹೋರಾಟ ಹೋರಾಟದಲ್ಲಿಯೇ ನಿಂತಿದೆ…
ರೈತರು ಕೃಷಿಕರು ದೇಶದ ಬೆನ್ನೆಲುಬು ಎನ್ನುವವರೇ ದಶಕಗಳಿಂದ ಅವರನ್ನು ಶೋಷಿಸಿದ್ದಾರೆ; ಶೋಷಿಸುತ್ತಲೇ ಇದ್ದಾರೆ…
ರೈತರು ತಾವು ಬೆಳೆದ ಬೆಳೆಗೆ ಸರಿಯಾದ ದರ ಸಿಗದೇ ಕೆಲವು ಬಾರಿ ರಸ್ತೆಗೆ ಸುರಿದು ಪ್ರತಿಭಟಿಸುತ್ತಿದ್ದರೂ ಅಧಿಕಾರಿಶಾಹಿ ಮೂಕವಾಗಿದೆ..
ಈ ಎಲ್ಲ ಮಾಹಿತಿಯನ್ನು ಹಲವು ತಿಂಗಳುಗಳ ಕಾಲ ನಂಜುಂಡಸ್ವಾಮಿ ಅವರೊಂದಿಗೆ ಚರ್ಚಿಸಿ ಅವರ ಸಂದರ್ಶನ ದಾಖಲಿಸಿ ಸಂಶೋಧನೆ ಮಾಡಿ ಪುಸ್ತಕ ರೂಪಕ್ಕೆ ತಂದಿದ್ದು ಡಾ. ಸವಿತ ಬಿ.ಸಿ. ಅವರು.
ಅವರಿಗೆ ಯಾಜಿ ಪ್ರಕಾಶನದ ಕೃತಜ್ಞತೆಗಳು.
ಎರಡು ಮೂರು ಹೆಸರುಗಳಲ್ಲಿ “ಹಸಿರುಶಾಲು ಬಾರುಕೋಲು” ಆಯ್ಕೆ ಮಾಡಿಕೊಂಡೆವು… ರೈತರ ಸಂಕೇತ ಹಸಿರುಶಾಲು…
ಹಾಗೆಯೇ ಕೆಲಸ ಮಾಡಿಕೊಡದ ಅಧಿಕಾರಿಗಳನ್ನು ಬಾರುಕೋಲಿನಿಂದ ಬಾರಿಸಿ ಎನ್ನುವಂತಹ ಹೇಳಿಕೆ ನೀಡಿದ್ದ ಪ್ರೊ. ಎಂಡಿಎನ್ ಅವರ ಮಾತನ್ನೇ ಉಳಿಸಿಕೊಂಡೆವು…
ನವಕರ್ನಾಟಕ ಮತ್ತು ಅಂಕಿತ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿರುತ್ತದೆ…
ಮೈಸೂರಿನ ಕೆ.ಆರ್ ವೃತ್ತದಲ್ಲಿರುವ ಸಾಹಿತ್ಯ ಸ್ತಂಭ ಪುಸ್ತಕ ಮಳಿಗೆಯಲ್ಲೂ ದೊರೆಯುತ್ತದೆ…
ಓದುಗರು ನೇರವಾಗಿಯೂ ಸಂಪರ್ಕಿಸಿದರೆ ಮನೆಗೆ ಕಳಿಸಲಾಗುವುದು.
ನಮಸ್ಕಾರ…