ಇಂದಿನ ಪತ್ರಿಕೆಗಳಲ್ಲೂ ಚಿನ್ನಮ್ಮನದೇ ಮುಖಪುಟ ಸುದ್ದಿ. ಚಾನೆಲ್ ಗಳಲ್ಲಿ ಮಾತ್ರ ಎಂದು ತಿಳಿದಿದ್ದೆ. ಆದರೆ ಪತ್ರಿಕೆಗಳಲ್ಲಿಯೂ ಪುಟಗಟ್ಟಲೆ ಅದೇ ರದ್ದಿ ಸುದ್ದಿ. ಇದು ಬೇಕಿತ್ತಾ ಸ್ವಾಮಿ. ಜನ ಕ್ಯಾಕರಿಸಿ ಉಗಿಯುತ್ತಿದ್ದಾರೆ. ಯಾಕೆ ನೀವುಗಳು ಬದಲಾಗುತ್ತಿಲ್ಲ?! ನಮ್ಮ ಸುತ್ತಲಿನ ಸುದ್ದಿಗಿಂತಲೂ ಜೈಲು ಪಾಲದವರ ವೈಭವೀಕರಣ ಬೇಕಾ.. ಅಲ್ಲಿ cm ಯಾರಾದರೆ ನಮಗೇನ್ರಿ ಲಾಭ.. ಕಾವೇರಿ ನೀರನ್ನೇನು ಅವರು ಬೇಡಾ ಅಂತಾರಾ ಇಲ್ವಲ್ಲ.. ಮಾಧ್ಯಮ ಮಿತ್ರರೆ ನಮ್ಮ ರಾಜ್ಯದಲ್ಲಿ ಈ ವರ್ಷ ಮಳೆ ಇಲ್ಲದೆ ಎಷ್ಟೋ ಹಳ್ಳಿಗಳಿಗೆ ಕುಡಿಯಲು ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳ ಗಮನ ಸೆಳೆದು ಎಲ್ಲಿ ನೀರು ಲಭ್ಯವಿದೆಯೋ ಆ ಮಾಹಿತಿ ನೀಡಿ ನೀರಿಲ್ಲದೇ ತತ್ತರಿಸುತ್ತಿರುವ ಜನರಿಗೆ ಸಹಾಯ ಮಾಡುವುದು ಪತ್ರಿಕೆಗಳ ಕರ್ತವ್ಯ. ಅದನ್ನು ಬಿಟ್ಟು ತಮಿಳಿಗರ ಒಲೈಸುತ್ತಿದ್ದೀರಲ್ಲ ಯಾಕೆ ಸ್ವಾಮಿ..ನಿಮ್ಮ ಟಿಆರ್ಪಿ ಜಾಸ್ತಿ ಆಗುವುದು ಕನ್ನಡಿಗರು ನೋಡಿದರೆ ಮಾತ್ರ ಎಂಬ ಪರಿಜ್ಞಾನವಿಲ್ಲವೆ. ನಿಮ್ಮ ಚಾನೆಲ್ ಗಳನ್ನು ಯಾವ ತಮಿಳರು ನೋಡುತ್ತಾರೆ ಸ್ವಾಮಿ.. ಶಶಿಕಲಾ ಮುದ್ದೆ ತಿಂದರೆಷ್ಟು ಬಿಟ್ಟರೆಷ್ಟು. ಅದು ನಮಗೆ ಮುಖ್ಯವಾ.. ದಯವಿಟ್ಟು ಇನ್ನು ಮುಂದಾದರೂ ಕನ್ನಡಿಗರಿಗೆ ಅನುಕೂಲವಾಗುವ ಸುದ್ದಿ ಪ್ರಕಟಿಸಿ. ಈಗ ಪರೀಕ್ಷೆ ಕಾಲ ಓದುವ ಎಳೆವಯಸ್ಸಿನ ಮಕ್ಕಳ ಭವಿಷ್ಯದತ್ತ ನಿಮ್ಮ ಗಮನವಿರಲಿ..
ಚಿನ್ನಮ್ಮನ ವೈಭವೀಕರಿಸಿದರೆ ನಿಮಗೇನು ಅವರು ಚಿನ್ನದ ಕಿರೀಟ ಹಾಕುವುದಿಲ್ಲ. ನಿಮ್ಮ ಚಾನೆಲ್ಗಳನ್ನು ನೋಡುವವರು ಕನ್ನಡಿಗರೇ ಹೊರತು ತಮಿಳರಲ್ಲ ಅಲ್ಲವೇ. ಇದೇ ರೀತಿ ನಿಮ್ಮ ಟಿಆರ್ಪಿ ಹಪಹಪಿಗೆ ನಾವೆಲ್ಲ ಕನ್ನಡ ಚಾನೆಲ್ ಗಳಿಂದ ವಿಮುಖರಾಗಬೇಕಾಗಬಹುದು.
ಹನಿ ಹನಿ ಕೂಡಿ ಹಳ್ಳ. ನಮ್ಮಂತೆ ಹಲವರು ಈ ರೀತಿ ಆಲೋಚಿಸಿದರೆ ನಿಮ್ಮ ಚಾನೆಲ್ ಯಾರು ನೋಡುತ್ತಾರೆ ಸ್ವಾಮಿ…
ಕರ್ನಾಟಕದ ಭವಿಷತ್ತಿನತ್ತ ತಮ್ಮ ಗಮನ ಕೇಂದ್ರೀಕರಿಸಿ.. ಹಣವೇ ಮುಖ್ಯವಲ್ಲ. ನಮಸ್ಕಾರ.