ತೋಚಿದ್ದು-ಗೀಚಿದ್ದು

ಜುಲೈ ೨೨ ೧೯೪೭

ಗೆಳೆಯರೇ ನಮಸ್ಕಾರ.
ತುಂಬಾ ದಿನಗಳ ನಂತರ ಮುಖಪುಸ್ತಿಕೆಯ ಗೋಡೆಯ ಮೇಲೆ ಅಕ್ಷರಗಳನ್ನು ಮೂಡಿಸುತ್ತಿರುವೆ…
ಯಾಜಿ ಪ್ರಕಾಶನ ಹಲವು ದಿನಗಳಿಂದ ತಟಸ್ಥವಾಗಿತ್ತು(ಕಾರಣ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು). ಈಗ ಮತ್ತೆ ತನ್ನ ಯೋಜನೆ ಮತ್ತು ಯೋಚನೆಗಳನ್ನು ಸಾಕಾರಗೊಳಿಸಲು ಸಕ್ರಿಯವಾಗಿದೆ…
ಇಂದು ಡಾ. ಸರಜೂ ಸರ್ ಕರೆ ಮಾಡಿದ್ದರು.. ಹಾಗೇ ಉಭಯಕುಶಲೋಪರಿ ನಂತರ
ವಿಷಯ ಗೊತ್ತಾ ಎಂದರು..
ಇಲ್ಲ ಅಂದೆ.. ಅದಕ್ಕವರು ನೀವು ಪ್ರಕಟಿಸಿರುವ ನನ್ನ ಕಾದಂಬರಿ #ಜುಲೈ ೨೨ ೧೯೪೭ ರ ಕೆಲ ಭಾಗ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ದ #ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ ಎಂದರು…
ತಕ್ಷಣ ಜಾಗೃತಗೊಂಡು ವಿವರ ಸಂಗ್ರಹಿಸಿದೆ.
ಯಾಜಿ ಪ್ರಕಾಶನಕ್ಕೆ ಗೌರವದ ಗರಿ… ಈ ಕಾದಂಬರಿಯು ಮೂರು ವರುಷಗಳ ಹಿಂದೆ ಸಿನಿಮಾ ಆಗಿ ತೆರೆ ಕಂಡಿತು. ನಮ್ಮ  ರಾಷ್ಟ್ರಧ್ವಜ  ಹುಟ್ಟಿದ ದಿನ ಜುಲೈ ೨೨ ೧೯೪೭.
ಆ ಸಿನಿಮಾವನ್ನು ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರು ನೋಡಿ ಖುಷಿ ಪಟ್ಟು …
ಯೇ ಹಿಂದಿ ಮೇ ಕರೋ ಎಂದು ನಿರ್ದೇಶಕರಿಗೆ ತಿಳಿಸಿದರಂತೆ…
ಇಷ್ಟೆಲ್ಲಾ ಹಿನ್ನೆಲೆ ಇರುವ ಈ ಕಾದಂಬರಿ ಈಗ ಒಂದು ವಿಶ್ವವಿದ್ಯಾಲಯದ ಪದವಿ ಪಠ್ಯವಾಗುತ್ತಿರುವುದು ಲೇಖಕರಿಗೂ, ಯಾಜಿ_ಪ್ರಕಾಶನಕ್ಕೂ ಖುಷಿಯ ವಿಚಾರ.. ಪುಸ್ತಕದ ಮುಖ ಬೆಲೆ ₹ 150/-  ಇದೆ. ವಿದ್ಯಾರ್ಥಿಗಳಿಗೆ 20% ರಿಯಾಯಿತಿ ಇದೆ. ಕನಿಷ್ಠ 2 ಪ್ರತಿ ಕೊಂಡಲ್ಲಿ ಕೋರಿಯರ್ ಚಾರ್ಜ್ ಉಚಿತ.
ನಮಸ್ಕಾರ.
#ಯಾಜಿ_ಪ್ರಕಾಶನದ ಪರವಾಗಿ
#ಹಂಪಿಯಾಜಿ

Leave a Reply

Your email address will not be published. Required fields are marked *