ಬೆನ್ನುಡಿ
…ಪೂರ್ವಾರ್ಧದ ಎಳೆಯ ದಿನಗಳ ಮುಗ್ಧ ಅಮಾಯಕ ಮಂಚಿಕೇರಿ ಮತ್ತು ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನಗಳ ಕಿಟಕಿಗಳ ಮೂಲಕ ಹೊಸ ವ್ಯಕ್ತಿತ್ವ ಪಡೆದ ಇಪ್ಪತ್ತೈದು ವರ್ಷಗಳ ನಂತರದ ಮಂಚಿಕೇರಿ-ಇವೆರಡೂ ನನ್ನ ಸಂವೇದನೆಯನ್ನು ಹಿಗ್ಗಿಸಿವೆ. ಪಠ್ಯ ಮತ್ತು ಪಠ್ಯೇತರಗಳ ಹದವಾದ ಎರಕದಂತಿರುವ ಜಿ.ಟಿ.ಭಟ್ಟರ ಜೀವನ ಪ್ರೇಮ ಮತ್ತು ಸಮಾಜಶೀಲತೆ ಈ ಆವರಣವನ್ನು ಪೋಷಿಸುತ್ತ ಬಂದಿದೆ. ಸಿದ್ದಿ ಪ್ರತಿಭೆ ಗಳನ್ನು ರಂಗಭೂಮಿಗೆ ತಂದಷ್ಟೇ ಅವರ ಇನ್ನೊಂದು ಮಹತ್ವದ ಪ್ರಯತ್ನ ಚತುರ್-ಚತುರೆಯರಾದ ತಮ್ಮ ಮಕ್ಕಳನ್ನೇ ತರಬೇತುಗೊಳಿಸಿ ಮಹಿಳಾ ಯಕ್ಷಗಾನ ವನ್ನು ಆ ಕಾಲದಲ್ಲಿ ರೂಪಿಸಿದ್ದು. ಹಾಲಿನ ಡೈರಿ ರೂಪು ಗೊಳ್ಳಲು ಸಹ ಅವರು ಹೆಣಗಿದ್ದಾರೆ. ಶಿಕ್ಷಕನೊಬ್ಬ ಶಾಲೆಯ ಗೋಡೆಗಳಾಚೆಯೂ ಹೀಗೆ ಸಮಾಜಕ್ಕೆ, ಊರಿಗೆ ಸಲ್ಲುವುದೇ ನಿಜವಾದ ಅಧ್ಯಾತ್ಮ. ಅವರ ಮತ್ತು ಪಾರ್ವತಕ್ಕನ ಹುರುಪು, ನೆಮ್ಮದಿ ವರ್ಧಿಸುತ್ತಲೇ ಇರಲಿ. ಅವರ ಸಾಮಾಜಿಕ ಋಣಾನುಬಂಧ ವಿಸ್ತರಿಸುತ್ತಲೇ ಇರಲಿ.
–ಜಯಂತ ಕಾಯ್ಕಿಣಿ
ಸಂಪಾದಕೀಯ
ಅರಿವಿನ ವಿಸ್ತಾರಕ್ಕೆ ಕೊನೆ ಎಂಬುದಿಲ್ಲ. ಆದರೆ ಅರಿವಿನ ಹಾದಿ ಕ್ರಮಿಸಿದ್ದನ್ನು ಅವಲೋಕಿಸಬಹುದು ಅಷ್ಟೇ. ಅಲ್ಲಿ ಇಡೀ ಬದುಕಿನ ಪಯಣವಿದೆ. ಸಮುದಾಯ ಒಳಗೊಂಡು ಹಂತ ಹಂತವಾಗಿ ಇಡೀ ಊರನ್ನೇ ಸುಶೀಕ್ಷಿತ ಮನಸ್ಸುಗಳಾಗಿ ಬೆಳೆಸಿದ ಸಂಕಥನವಿದೆ. ಗುರು-ಶಿಷ್ಯರ ಅನುಬಂಧವಿದೆ. ಸಾಂಸ್ಕೃತಿಕ ಸಾಂಘಿಕ ಬದುಕು ನಳನಳಿಸುವ ಚಿತ್ರಣವಿದೆ. ಬೊಮ್ಮನಹಳ್ಳಿ ಎಂಬ ಪುಟ್ಟ ಊರಿನ ಮದ್ಯೆ ಬೆಳೆದು ಬಂದ ಗಜಾನನ ತಿಮ್ಮಣ್ಣ ಭಟ್, ಶಿಕ್ಷಣ, ರಂಗಭೂಮಿ, ಯಕ್ಷಗಾನ, ಕೃಷಿ, ಸಹಕಾರ ಹೀಗೆ ಎಲ್ಲ ಆಯಾಮಗಳಲ್ಲೂ ತೊಡಗಿಸಿಕೊಳ್ಳುವ ಮೂಲಕ ಜಿ.ಟಿ.ಭಟ್ ಬೊಮ್ಮನಹಳ್ಳಿಯಾಗಿ ಅನಾವರಣಗೊಂಡ ಕಥನವೇ ಈ ಬೊಮ್ಮನಹಳ್ಳಿ ಜಂಗಮ.”
ಹೌದು. ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ ಮೊದಲಿನಿಂದಲೂ ತನ್ನ ಸಾಂಸ್ಕೃತಿಕ ಹುರುಪನ್ನು ಸದಾ ಕಾಪಿಟ್ಟುಕೊಂಡೇ ಬಂದಿರುವುದರ ಹಿಂದೆ ಆ ಮಣ್ಣಿನ ಗುಣ ಇದೆ ಎಂದೇ ಹೇಳಬಹುದು. ಇದಕ್ಕೆ ಪೂರಕವಾಗಿ ಉಲ್ಲೇಖಿಸುವುದಾದರೆ ಕೇವಲ ಆದರ್ಶಕ್ಕೆ ಮಾತ್ರವಲ್ಲ ತಾನು ಕಲಿತು ಬೇರೆಡೆ ಉದ್ಯೋಗಕ್ಕೆ ಹೋಗದೇ ತಮ್ಮ ಹಳ್ಳಿಯಲ್ಲೇ ನೆಲೆನಿಂತ ಬೊಮ್ಮನಹಳ್ಳಿ ಜಿ.ಟಿ.ಭಟ್‌ರು ಶಿಕ್ಷಕರಾಗಿ, ಆ ಭಾಗದ ಸಂಸ್ಕೃತಿ, ಸಮುದಾಯವನ್ನು ನಾಟಕ, ಯಕ್ಷಗಾನ ಹೀಗೆ ಕಲೆಯ ಮೂಲಕ ವಿಸ್ತಾರ ಪಡೆಯುವಂತೆ ಮಾಡುತ್ತ ೮೦ರ ಹರೆಯಕ್ಕೆ ಹುರುಪು ಹೊತ್ತು ನಿಂತಿದ್ದಾರೆ. ಅವರಿಗೆ ಈಗ ಶಿಷ್ಯರ, ಸಮಾಜದ ಪ್ರೀತಿ ಸಂದಾಯವಾಗುವ ಹೊತ್ತಿನಲ್ಲಿ ಅಕ್ಷರದ ಮೂಲಕ ಸಲ್ಲುವ ನುಡಿನಮನದ ಮುಂದುವರೆದ ಭಾಗವೇ ಈ ಕೃತಿಯ ಸಂಪಾದನೆ.
ಸಾಮಾನ್ಯವಾಗಿ ಅಭಿನಂದನಾ ಕೃತಿ ಎಂದರೆ ಅಭಿನಂದಿಸಲ್ಪಡುವ ವ್ಯಕ್ತಿಗಳ ತುಸು ಹೆಚ್ಚೇ ಮುಖಸ್ತುತಿ ಅನಾವರಣ. ಆದರೆ ಇಲ್ಲಿನ ಬೊಮ್ಮನಹಳ್ಳಿ ಜಂಗಮ ಎಲ್ಲರನ್ನು ತನ್ನೆಡೆಗೆ ಸೆಳೆದು, ಕರೆದುಕೊಂಡೇ ಸಮ್ಮೋಹಕಗೊಳಿಸುವಂತೆ ಸಾಗುವುದು ವಿಶೇಷ. ಹಾಗಾಗಿ ಇಲ್ಲಿ ಜಿ.ಟಿ.ಭಟ್ ಅವರನ್ನು ವ್ಯಕ್ತಿಗಿಂತ ಶಕ್ತಿಯಾಗಿಯೇ ಅವಲೋಕಿಸಲಾಗಿದೆ. ಈ ನೆಲೆಯಲ್ಲಿ ಹಲವಾರು ಮಹತ್ತರ ಹೆಜ್ಜೆಗಳನ್ನು ದಾಖಲಿಸಲಾಗಿದೆ. ಒಟ್ಟು ೩೩ ಲೇಖನಗಳ ಸಂಗ್ರಹ ಇಲ್ಲಿದೆ. ಕಲೆಯ ಬಿತ್ತಿ’, ನೆನೆಪಿನ ಬುತ್ತಿ’ ಎಂಬ ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು ಕಲೆಯ ಬಿತ್ತಿ ಜಿ.ಟಿ.ಭಟ್ ಅವರ ಒಟ್ಟಾರೆ ಸಾಂಸ್ಕೃತಿಕ ಮಜಲಿನ ಒಳನೋಟವನ್ನು ತೆರೆಯುತ್ತಾ ಸಾಗಿದರೆ ನೆನೆಪಿನ ಬುತ್ತಿ ಅವರ ಒಡನಾಡಿ ಸ್ನೇಹಿತರ, ಪ್ರೀತಿಯ ಶಿಷ್ಯರ ಹಾಗು ಮಕ್ಕಳ ಆಪ್ತ ಬರಹ ಅನಾವರಣಗೊಳ್ಳುವುದು.
ಬೊಮ್ಮನಹಳ್ಳಿ ಮಣ್ಣಿನ ದಾರಿ’ ಎಂಬ ಶೀರ್ಷಿಕೆ ಹೊತ್ತ ಕಥೆಗಾರ ಜಯಂತ ಕಾಯ್ಕಿಣಿ ಅವರ ಬರಹದೊಂದಿಗೆ ಪ್ರಾರಂಭವಾಗಿ ಮಂಚಿಕೇರಿಯ ಆವರಣ ಸಾಹಿತ್ಯ, ಸಂಗೀತ, ಕಲೆ ಮಾತ್ರವಲ್ಲ ತನ್ನ ಸಂವೇದನೆ ಹಿಗ್ಗಿಸಿದ ಪರಿ ಹಾಗು ಶಿಕ್ಷಕನೊಬ್ಬ ಶಾಲೆಯ ಗೋಡೆಗಳಾಚೆ ಸಮಾಜಕ್ಕೆ ನಿಲ್ಲುವ ಆದ್ಯಾತ್ಮ ಎಂದು ಜಿ.ಟಿ.ಭಟ್ಟರ ಜೀವನ ಪ್ರೇಮ, ಸಮಾಜಶೀಲತೆ ಬಗ್ಗೆ ಪ್ರಸ್ತಾಪಿಸುವ ಮೂಲಕ ಒಬ್ಬ ಕವಿಯ ನೆನಪಿನ ಬಿತ್ತಿಯಲ್ಲಿ ಮೂರು ದಶಕಗಳ ಸ್ಮೃತಿ ಇನ್ನು ತಾಜಾ ಆಗಿಯೇ ಉಳಿದ ಪರಿ ನಿಜಕ್ಕೂ ಬೆರಗು. ಇನ್ನು ಮಂಚಿಕೇರಿ ತೇರು’ ಎಂಬ ರಾಧಾಕೃಷ್ಣ ಕಲ್ಚಾರ್ ಬರಹವಂತೂ ಹಲವು ಆಯಾಮಗಳಲ್ಲಿ ತೆರೆದುಕೊಳ್ಳುತ್ತ ಸಾಗುತ್ತದೆ. ಮಂಚಿಕೇರಿ ಊರನ್ನು ಜಿ.ಟಿ.ಭಟ್ಟರು ತಮ್ಮ ಸಾಂಸ್ಕೃತಿಕ ಮಾಯಾದಂಡ ಸ್ಪರ್ಶದ ಮೂಲಕ ಬೆಳೆಸಿದರು ಎಂದೇ ಬಣ್ಣಿಸುತ್ತಾರೆ. ಅಷ್ಟೇ ಅಲ್ಲ ತಾಯ ಅಂತಃಕರಣದ ಹಾಗೆಯೇ ಎಲ್ಲವನ್ನು ಒಳಗೊಂಡು ಕಲೆಯನ್ನು ಪೋಷಿಸಿದರು ಎಂಬ ಅರ್ಥಪೂರ್ಣ ವಿವರಣೆ ಅವರದು. ಇನ್ನು ಭಟ್ ಅವರ ಶಿಷ್ಯರು ಕವಿಯು ಆದ ಚಂದ್ರಕಾಂತ ಪೋಕಳೆ ಗುರುವಿನ ಬಗ್ಗೆ ಬರೆದ ಕವಿತೆ ಎಲ್ಲರಂತವರಲ್ಲ ನನ್ನ ಗುರು’ ಇಡೀ ಗುರುವಿನ ಚಿತ್ರಣವನ್ನೇ ಕಣ್ಮುಂದೆ ಕಟ್ಟುವಂತೆ ಮಾಡಿದೆ. ನೀನಾಸಂ ನಂಟು ಗಾಢವಾಗಿ ಬೆಳೆದುಬಂದ ದಾರಿಯಲ್ಲಿ ವೆಂಕಟರಮಣ ಐತಾಳರು ಗುರುತಿಸಿದ ಜಿ.ಟಿ.ಭಟ್ ಅವರ ಅದ್ಭುತ ಪಾತ್ರ ಅಭಿನಯ, ನಟ ವಿಶ್ಲೇಷಣೆ, ಪುರುಷೋತ್ತಮ ಬಿಳಿಮಲೆ ಅವರ ಭಾರತೀಯ ಭಾಷೆಗಳು ಮತ್ತು ಶಿಕ್ಷಣದ ಸಮಸ್ಯೆ’ ಲೇಖನ ಸಣ್ಣ ಭಾಷೆಗಳು ಅಳಿವಿನಂಚಿನಲ್ಲಿ ಎಂಬ ಕಳಕಳಿ ಹೊತ್ತ ಬರಹ, ಹಳ್ಳಿಯ ಕಲಾಜೀವಂತಿಕೆ’ ಎಂಬ ಡಾ.ರಾಜಪ್ಪ ದಳವಾಯಿ ಲೇಖನ ಹೊಸ ರಂಗಭೂಮಿಯ ಸಾಧ್ಯತೆ ಬಾಗಿಲನ್ನು ತೆರೆದಿಟ್ಟಿದೆ. ಜಿ.ಟಿ.ಭಟ್ ಅವರ ನಿರೀಕ್ಷೆ ಇಲ್ಲದ ಕರ್ಮಯೋಗಿಯಾಗಿ ಎಲ್ಲ ರಂಗದಲ್ಲೂ ಸೇವೆ ಬಗ್ಗೆ ರಮಾನಂದ ಐನಕೈ ಲೇಖನ, ಆಪ್ತ ಒಡನಾಡಿ ಹಬ್ಬು ಸಹೋದರರು ಜಿ.ಟಿ.ಭಟ್ ಅವರ ಆತ್ಮೀಯತೆ, ಸಹಾಯ ನೆನೆದರೆ, ಮಂಚಿಕೇರಿಯಲ್ಲಿ ನಾಟಕ ಹಾಗು ಎಲ್ಲ ಚಟುವಟಿಕೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಸಹಯಾನ’ ಬಗ್ಗೆ ದುಂಡಿ ಭಟ್ ದಾಖಲಿಸಿದ್ದಾರೆ. ನಾರಾಯಣ ಯಾಜಿ ಹಾಗು ಕೆರೆಮನೆ ಶಿವಾನಂದ, ಎಲ್.ಎಸ್.ಶಾಸ್ತ್ರೀ ಅವರ ಲೇಖನಗಳು ಜಿ.ಟಿ.ಭಟ್ ಅವರ ಯಕ್ಷಗಾನ ಪ್ರೀತಿ ಕುರಿತು ಮಾತಾಡುತ್ತವೆ. ಮತ್ತು ಸಿದ್ದಿ ಸಮುದಾಯದ ಜೊತೆಗೆ ನಡೆಸಿದ ಸಂದರ್ಶನ ಮತ್ತು ಸ್ವತಃ ಜಿ.ಟಿ.ಭಟ್ ಅವರು ಯಕ್ಷಗಾನ ಬಗ್ಗೆ ಬರೆದ ಲೇಖನ ಹೀಗೆ ಹತ್ತಾರು ಹೊಳಹುವಿನೊಂದಿಗೆ ಪ್ರಸ್ತುತಗೊಂಡಿದೆ. ಅಷ್ಟೇ ಅಲ್ಲ, ಹಳ್ಳಿಯೊಳಗೆ ಲೋಕಜ್ಞಾನ ಕಟ್ಟಿಕೊಡುವ, ಗ್ರಹಿಸುವ ಅಧ್ಯಯನಾತ್ಮಕ ಭಾಗವಾಗಿ ಮೂಡಿಬಂದಿದೆ.
ಇನ್ನು ನೆನೆಪಿನ ಬುತ್ತಿಯಲ್ಲಿ ಜಿ.ಟಿ.ಭಟ್ ಅವರ ಪರಮಾಪ್ತ ಗೆಳೆಯ ಶಿರ್ನಾಲೆ ತಿಮ್ಮಪ್ಪ ಬರೆದ ಬರಹ ಜಿ.ಟಿ.ಭಟ್ ಬಾಲ್ಯದಿಂದ ಹಿಡಿದು ಸ್ನೇಹಿತರ ತರ್ಲೆ, ಎಲ್ಲಿಲ್ಲದ ಹುರುಪು, ಆಸಕ್ತಿ, ಚೈತನ್ಯ, ಆಪ್ತಬರಹ, ಹಾಗೆಯೇ ಜಿ.ಟಿ.ಭಟ್ ಅವರ ಪತ್ನಿ ಪಾರ್ವತಿ ತಮ್ಮ ಮಧುರ ನೆನಪುಗಳನ್ನು ದಾಖಲಿಸಿದರೆ, ದೂರದ ಅಮೆರಿಕೆಯಲ್ಲಿ ನೆಲೆಸಿರುವ ಭಟ್ ಅವರ ಶಿಷ್ಯ ಗಜಾನನ ಜಾಜಿ, ಇನ್ನೊಬ್ಬ ಪ್ರಿಯ ಶಿಷ್ಯ ವಿಂಗ್ ಕಮಾಂಡರ್ ಮುರಳಿ ಭಟ್ ಹಿತ್ಲಳ್ಳಿ ತಮ್ಮ ಜೀವನದ ದೊಡ್ಡ ಮಾರ್ಗದರ್ಶಕ ಗುರು ಎಂಬ ಗೌರವ ಲೇಖನ, ಹೀಗೆ ಅನೇಕ ಶಿಷ್ಯರ ಪ್ರೀತಿ ಮತ್ತು ಗೌರವಕ್ಕೆ ಸಾಕ್ಷಿಯಾಗಿದೆ ಈ ಕೃತಿ. ಗುರುಗಳ ಹೊರತಾಗಿಯೂ ಜಿ.ಟಿ.ಭಟ್ ಅವರ ಐವರು ಮಕ್ಕಳು ತಮ್ಮ ಅಪ್ಪನ ಕುರಿತು ಭಿನ್ನವಾದ ನೆಲೆಯಲ್ಲಿ ತಮ್ಮ ಅನುಭವಗಳ ಮೂಲಕ ಕಟ್ಟಿಕೊಟ್ಟಿದ್ದು ಕೂಡ ಈ ಕೃತಿಯ ಮತ್ತೊಂದು ಕಿಟಕಿ. ಪ್ರೀತಿಯಿಂದ ಬರೆದು ಕೊಟ್ಟ ಎಲ್ಲ ಹಿರಿಯ, ಕಿರಿಯ ಲೇಖಕರಿಗೂ, ಅಪರೋಕ್ಷವಾಗಿ ಈ ಕೃತಿಗೆ ಸಲಹೆ ನೀಡಿದ ಎಲ್ಲರಿಗೂ ಸಂಪಾದಕ ಮಂಡಳಿ ಪರವಾಗಿ ಧನ್ಯವಾದಗಳು.
ಹೀಗೊಂದು ಕೃತಿಯ ಆಶಯಕ್ಕೆ ಬೆನ್ನೆಲುಬಾಗಿ ನಿಂತವರು ಹೊಸಪೇಟೆ ಯಾಜಿ ಪ್ರಕಾಶನದ ಗಣೇಶ್ ಯಾಜಿ ಅವರು. ಜಿ.ಟಿ.ಭಟ್ ಅವರ ಕುರಿತಾದ ಹಲವು ಆಯಾಮಗಳ ಒಳನೋಟವನ್ನು ಹೀಗೆ ದಾಖಲೀಕರಣವಾಗಲು ಒತ್ತಾಸೆಯಾಗಿ ನಿಂತು ಬೊಮ್ಮನಹಳ್ಳಿ ಜಂಗಮ’ ಕೃತಿ ಅಚ್ಚುಕಟ್ಟಾಗಿ ಹೊರತರುವಲ್ಲಿ ಆಸ್ಥೆ ವಹಿಸಿದ್ದಾರೆ, ಅವರಿಗೆ ತುಂಬು ಪ್ರೀತಿಯ ಧನ್ಯವಾದಗಳು. ಕೃತಿಯ ಅಕ್ಷರದೋಷ ತಿದ್ದುವುದರ ಜೊತೆಗೆ ಈ ಕೃತಿಯನ್ನು ಯಾಜಿ ಪ್ರಕಾಶನದ ಮೂಲಕ ಪ್ರಕಟಿಸಲು ಒಪ್ಪಿ, ಸಹಕರಿಸಿದ ಪ್ರಕಾಶಕಿ ಸವಿತಾ ಯಾಜಿ, ಮುಖಪುಟ ವಿನ್ಯಾಸಗೊಳಿಸಿದ ಕಲಾವಿದ ಅಜಿತ್ ಕೌಂಡಿನ್ಯ ಅವರಿಗೂ ನಮನಗಳು.
ಹೀಗೆ ತನ್ನೆಲ್ಲ ಜೀವಿತಾವಧಿಯಲ್ಲಿ ನಿಃಸ್ವಾರ್ಥವಾಗಿ ಹಿಗ್ಗಿಸಿಕೊಂಡ ಅರಿವಿನ ಗುರುವಿಗೆ ಒಂದು ಪ್ರೀತಿಯ ನಮಸ್ಕಾರ…
–ಬೊಮ್ಮನಹಳ್ಳಿ ಸಹೋದರಿಯರು
ಪುಟ ತೆರೆದಂತೆ…
ಸವಿನುಡಿ / ೫
ಸಂಪಾದಕೀಯ / ೭
ಕಲೆಯ ಬಿತ್ತಿ
೧. ಬೊಮ್ಮನಹಳ್ಳಿಯ ಮಣ್ಣಿನ ದಾರಿ -ಜಯಂತ ಕಾಯ್ಕಿಣಿ / ೧೫
೨. ಭಾರತೀಯ ಭಾಷೆಗಳು ಮತ್ತು ಶಿಕ್ಷಣ ಮಾಧ್ಯಮದ ಸಮಸ್ಯೆಗಳು -ಪುರುಷೋತ್ತಮ ಬಿಳಿಮಲೆ / ೧೯
೩. ಮಂಚಿಕೇರಿಯ ತೇರು -ಪ್ರೊ. ರಾಧಾಕೃಷ್ಣ ಕಲ್ಚಾರ್ / ೨೬
೪. ಎಲ್ಲರಂಥವರಲ್ಲ ನನ್ನ ಗುರು! -ಚಂದ್ರಕಾಂತ ಪೋಕಳೆ / ೩೧
೫. ಜಿ.ಟಿ. ಭಟ್ರು ಎಂಬ ಮೇಷ್ಟ್ರು -ಬಿ.ಆರ್.ವೆಂಕಟರಮಣ ಐತಾಳ / ೩೪
೬. ಕರ್ಮಯೋಗಿ ಬೊಮ್ನಳ್ಳಿ ಜಿ.ಟಿ.ಭಟ್ಟರ ಸಹಸ್ರ ಚಂದ್ರ ದರ್ಶನ -ರಮಾನಂದ ಐನಕೈ / ೩೬
೭. ಹಳ್ಳಿಯ ಕಲಾಜೀವಂತಿಕೆ -ಡಾ. ರಾಜಪ್ಪ ದಳವಾಯಿ / ೪೧
೮. ನನ್ನ ಆತ್ಮೀಯ ಗೆಳೆಯ ಜಿ.ಟಿ.ಭಟ್ಟ -ಮೋಹನ ಹಬ್ಬು / ೪೭
೯. ಉ.ಕ. ಜಿಲ್ಲೆಯ ಸಾಂಸ್ಕೃತಿಕ ಲೋಕ ಮರೆಯಲಾರದ ಹೆಸರು ಜಿ.ಟಿ.ಭಟ್ಟ -ಎಲ್.ಎಸ್.ಶಾಸ್ತ್ರಿ / ೫೧
೧೦. ಜಿ.ಟಿ. ಎಂದರೆ ಸ್ಫೂರ್ತಿ! -ಕೆರೆಮನೆ ಶಿವಾನಂದ ಹೆಗಡೆ / ೫೪
೧೧. ಬಹು ಆಯಾಮದ ಸರಳ ವ್ಯಕ್ತಿತ್ವದ ಜಿ.ಟಿ.ಭಟ್ಟರು -ನಾರಾಯಣ ಯಾಜಿ / ೫೭
೧೨. ನಿಸ್ಪೃಹತೆಯ ಸಾಕಾರ ನಮ್ಮ ಜಿಟಿ ಮಾಸ್ತರ್ -ಅರುಣಕುಮಾರ ಹಬ್ಬು / ೬೨
೧೩. ಸಹಯಾನ -ಆರ್.ಎನ್.ದುಂಡಿ / ೬೭
೧೪. ಯಕ್ಷ ಕಲಾವಿದರ ಪ್ರಾಥಮಿಕ ಅರ್ಹತೆಗಳು -ಜಿ.ಟಿ.ಭಟ್ಟ, ಬೊಮ್ಮನಹಳ್ಳಿ / ೭೧
೧೫. ಯಕ್ಷಗಾನ ರಸಗ್ರಹಣ -ಜಿ.ಟಿ.ಭಟ್ಟ, ಬೊಮ್ಮನಹಳ್ಳಿ / ೭೫
೧೬. ಮಾತುಕತೆ -ವಿದ್ಯಾ-ಜ್ಯೋತಿ, ಬೊಮ್ಮನಹಳ್ಳಿ / ೭೯
ನೆನಪಿನ ಬುತ್ತಿ
೧೭. ಚಿತ್ತಭಿತ್ತಿಯಲ್ಲಿ ಮೂಡಿದ ಅಪರೂಪದ ಚಿತ್ರಗಳು -ಶಿರ್ನಾಲೆ ಟಿ.ವಿ.ಹೆಗಡೆ / ೮೫
೧೮. ಎಲ್ಲರಂಥವರಲ್ಲ ನನ್ನ ಪತಿರಾಯ! -ಪಾರ್ವತಿ ಗಜಾನನ ಭಟ್ / ೮೯
೧೯. Guru Naman to ‘Teacher’s Teacher’ -Sri G.T.Bhattru, Bommanahalli -Jajimane GG and Sarveshwari are the alumni of RRHS / ೯೧
೨೦. ನಮ್ಮ ಮೆಚ್ಚಿನ ಮೇಷ್ಟ್ರು -ಶ್ರೀ ಜಿ.ಟಿ.ಭಟ್ರು -ವಿಂಗ್ ಕಮಾಂಡರ್ ಮುರಾರಿ ಭಟ್ಟ / ೯೫
೨೧. ಮಂಚಿಕೇರಿ ಸಾಂಸ್ಕೃತಿಕ ರಾಯಭಾರಿ -ವಿ.ಜಿ.ಭಟ್ / ೯೯
೨೨. ಅಪ್ಪ ಅನ್ನುವ ದಣಿವರಿಯದ ದೈತ್ಯರೂಪ -ಉಷಾ ಐನಕೈ / ೧೦೧
೨೩. ನನ್ನ ಪಾಲಿನ ’ಪ್ಯಾಂಟಮ್’ ನಮ್ಮಪ್ಪ -ಡಾ. ಶೀಲಾ ಹೊಸ್ಮನೆ / ೧೦೫
೨೪. ನೆನಪಿನ ಓಲೆ -ವಾಸುಕಿ ಮಳಗಿಮನೆ / ೧೦೭
೨೫. ನನ್ನ ಪ್ರೀತಿಯ ಬಹುಮುಖ ಪ್ರತಿಭೆಯ ಗುರುಗಳು -ಜಯಲಕ್ಷ್ಮಿ ಹೆಗಡೆ / ೧೦೯
೨೬. ಪ್ರೇರಣೆಯ ಸಾಕಾರಕ್ಕೆ ಮಾದರಿ ಗುರು -ಶ್ರೀಪಾದ್ ಭಟ್ / ೧೧೧
೨೭. ಬೊಮ್ಮನಹಳ್ಳಿ ಕುಟುಂಬದ ದೊಡ್ಡಣ್ಣ… ಈ ನಮ್ಮ ಜಿ.ಟಿ.ಬಟ್ರು -ಡಾ. ಕೃಷ್ಣಮೂರ್ತಿ ಭಟ್ / ೧೧೩
೨೮. ಜಿ.ಟಿ.ಭಟ್ಟರು ಅಂದ್ರೆ ಅಮರಕೋಶ ಇದ್ದಂತೆ -ವಿ.ಎನ್.ಭಾಗವತ / ೧೧೬
೨೯. ಭಾವದೊಡಲ ಬಿಂಬ -ನೃತ್ಯ ವಿದುಷಿ ಡಾ. ವಿಜಯಲಕ್ಷ್ಮಿ ಕಂಪ್ಲಿ / ೧೧೮
೩೦. ನುಡಿದಂತೆ ನಡೆದಿರುವ ಮೆಚ್ಚಿನ ಶಿಕ್ಷಕರು -ಶಿರ್ನಾಲೆ ಸುಬ್ರಹ್ಮಣ್ಯ ಹೆಗಡೆ-ಪ್ರೇಮಲತಾ / ೧೨೧
೩೧. ಜಿ.ಟಿ.ಭಟ್ಟರು ಕ್ರಮಿಸಿದ ದಾರಿ -ಪುರುಷೋತ್ತಮ ಭಟ್ / ೧೨೩
೩೨. ’ಬಹುರೂಪಿ’ ಅಪ್ಪ -ಜ್ಯೋತಿ ಭಟ್, ಬೊಮ್ಮನಹಳ್ಳಿ / ೧೨೫
೩೩. ಅಂಗಳದ ಅಶ್ವತ್ಥ -ವಿದ್ಯಾ ಶರ್ಮ / ೧೨೯
ಛಾಯಾಚಿತ್ರಗಳು / ೧೩೫
Reviews
There are no reviews yet.