ಪುಸ್ತಕದ ಕುರಿತು ಎರಡು ಮಾತು…
ಮ್ಯಾನೇಜ್ಮೆಂಟ್ ಗುರು ಎಂದೇ ಪ್ರಸಿದ್ಧರಾಗಿರುವ, ಪೀಟರ್ ಡ್ರಕ್ಕರ್ ಅವರು ಕಾರ್ಪೊರೇಟ್ ನಿರ್ವಹಣಾ ಸಾಮರ್ಥ್ಯ ಕುರಿತಾಗಿ ಕೆಲವು ನಿಯಮಗಳನ್ನು ಉಲ್ಲೇಖಿಸು ತ್ತಾರೆ. ಅದರಲ್ಲಿ ಮುಖ್ಯವಾಗಿರುವಂತಹುದು ಈ ಪಂಚ ಸೂತ್ರಗಳು.
- ಗುರಿಗಳನ್ನು ಹೊಂದಿಸುವುದು.
- ಗುಂಪನ್ನು ಸಂಘಟಿಸುವುದು.
- ಪ್ರೇರಣೆ ಮತ್ತು ಸಂವಹನ.
- ಕಾರ್ಯಕ್ಷಮತೆಯನ್ನು ಅಳೆಯುವುದು.
- ಉದ್ಯೋಗಿಗಳನ್ನು ಅಭಿವೃದ್ಧಿಪಡಿಸುವುದು.
ತದನಂತರದಲ್ಲಿ, ಸಂಕೀರ್ಣ ವಾತಾವರಣದಲ್ಲಿ ಬದಲಾವಣೆಯನ್ನು ತರುವುದು, ಉತ್ಪಾದನೆ ಯನ್ನು ಹೆಚ್ಚಿಸುವುದು, ಉದ್ಯೋಗಿಗಳ ಕಾರ್ಯಕ್ಷಮತೆಯನ್ನು ವೃದ್ಧಿಸುವುದು.
ಹಿಂದಿನ ದಿನಗಳಲ್ಲಿ ಬದಲಾವಣೆ ಎಂದರೆ ಬಹಳಷ್ಟು ಪರಿಶ್ರಮವನ್ನು ಹಾಕಬೇಕಾಗುತಿತ್ತು. ಆದರೆ ಇಂದಿನ ಜನಾಂಗ ಬಹಳ ತ್ವರಿತವಾಗಿ ಬದಲಾವಣೆಯನ್ನು ಒಪ್ಪಿಕೊಳ್ಳುತ್ತಾರೆ ಹಾಗು ಅಪ್ಪಿಕೊಳ್ಳುತ್ತಾರೆ. ಇದೆಲ್ಲಕ್ಕೂ ಮುಖ್ಯವಾಗಿ ಬೇಕಿರುವುದು ತನ್ನ ಕೆಲಸ ಮತ್ತು ಜವಾಬ್ದಾರಿಯ ಬಗ್ಗೆ ಪರಿಜ್ಞಾನ.
ಭಾರತದಲ್ಲಿರುವ ಉದ್ಯೋಗಿಗಳ ಬುದ್ಧಿಮತ್ತೆಯಿಂದಾಗಿಯೇ, ಸುಮಾರು ೬೦% ಉದ್ಯೋಗಿಗಳು ಮೃದು ಕೌಶಲ್ಯದ ಸೇವಾನಿರತ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಕೌಶಲ್ಯದ ಪರಿಣಿತಿಗಾಗಿ ಉದ್ಯೋಗಿಗಳು ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕಾಗುತ್ತದೆ ಮತ್ತು ಹೊಸ ಹೊಸ ಆವಿಷ್ಕಾರಗಳನ್ನು ಮಾಡಬೇಕಾಗುತ್ತದೆ. ಇಂತಹ ಪರಿಣಿತ ಕೆಲಸಗಾರರು ತಾವು ತೆಗೆದುಕೊಳ್ಳುವ ಕೆಲಸಕ್ಕೂ ಮೊದಲೇ, ಹಲವು ಮಜಲುಗಳ ಯೋಜನೆಯನ್ನು ಸಿದ್ಧಪಡಿಸಿ ಇಟ್ಟುಕೊಳ್ಳಬೇಕಾಗುತ್ತದೆ.
ಉದಾಹರಣೆಗಾಗಿ, ಡಾಕ್ಟರ್ ಒಂದು ಆಪರೇಷನ್ ಮಾಡಬೇಕೆಂದರೆ ಹಲವು ದಿನಗಳಿಂದ ರೋಗವನ್ನು ಪರೀಕ್ಷಿಸಿ ಯಾವ ರೋಗವೆಂದು ನಿರ್ಣಯಿಸಿ, ಆಪರೇಷನ್ ಹೇಗೆ ಮಾಡಬೇಕೆಂದು ನಿರ್ಧರಿಸಿ, ಪೂರಕ ಅನುಕೂಲತೆಗಳನ್ನು ಸಜ್ಜುಗೊಳಿಸಿ ನಿಗದಿತ ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ಅನುಭವಿ ಸಿಬ್ಬಂದಿಯೊಡನೆ ತನ್ನ ಕಾರ್ಯವನ್ನು ಕೈಗೊಳ್ಳಬೇಕಾಗುತ್ತದೆ. ಚಿಕಿತ್ಸೆಯ ಮಧ್ಯದಲ್ಲಿ ಅಡೆ-ತಡೆಗಳಿಗೆ ಪರ್ಯಾಯ ಕಾರ್ಯ ವೈಖರಿಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಮಧ್ಯದಲ್ಲಿಯೇ ಕೆಲವು ನಿರ್ಣಯಗಳನ್ನು ಚಿಕಿತ್ಸೆ ಯಶಸ್ವಿಯಾಗಲು ಕೈಗೊಳ್ಳಬೇಕಾಗುತ್ತದೆ. ಒಮ್ಮೆ ಶಸ್ತ್ರ ಚಿಕಿತ್ಸೆ ಫಲಪ್ರದವಾಯಿತೆಂದರೆ ಆ ಚಿಕಿತ್ಸೆಯ ಪ್ರಕ್ರಿಯೆಯನ್ನು ಅಳವಡಿಸಿಕೊಂಡು ಇತರ ಶಸ್ತ್ರ ಚಿಕಿತ್ಸೆಗಳನ್ನು ತ್ವರಿತವಾಗಿ, ನಿಖರವಾಗಿ ಕೈಗೊಳ್ಳುವುದು ಸಾಧ್ಯವಾಗುತ್ತದೆ.
ಶ್ರೀ ಎಚ್.ಶ್ರೀಧರ ರಾವ್ ಅವರ ಈ ಪುಸ್ತಕದಲ್ಲಿ ಮೇಲೆ ಹೇಳಿದ ಅಂಶಗಳನ್ನು ಕಾಣಬಹುದು. ಒಬ್ಬ ನುರಿತ ನಿರ್ವಹಣಾ ಅಧಿಕಾರಿಯು ತನ್ನ ಸಾಮರ್ಥ್ಯಗಳಿಂದ, ಕಾರ್ಯ ವೈಖರಿಯ ಹಾಗು ಜವಾಬ್ದಾರಿಯ ಫಲಪ್ರದತೆಯನ್ನು ಕ್ರೋಡೀಕರಿಸಿರುವ ಬರವಣಿಗೆ. ತನ್ನ ವೈಯಕ್ತಿಕ ಬ್ಯಾಂಕಿಂಗ್ ಉದ್ಯೋಗದಲ್ಲಿ ಎದುರಾದ ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸಿದ ರೀತಿಯನ್ನು ಮನದಟ್ಟಾಗುವಂತೆ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ಒಬ್ಬ ಸಾಧಾರಣ ಉದ್ಯೋಗಿ, ನಿರಂತರ ಬ್ಯಾಂಕಿಂಗ್ ಜ್ಞಾನಾರ್ಜನೆ ಮಾಡಿಕೊಂಡು ಹಲವು ಮಜಲುಗಳನ್ನು ದಾಟಿ, ಭಿನ್ನ ಅಭಿರುಚಿಯ ಉದ್ಯೋಗಿಗಳೊಂದಿಗಿನ ಸಹಯೋಗದಲ್ಲಿ ಸಾಮರಸ್ಯವನ್ನು ಕಂಡುಕೊಂಡು, ನಾಯಕನಾಗಿ ಬೆಳೆದು ಹೇಗೆ ಜವಾಬ್ದಾರಿಗಳನ್ನು ನಿಭಾಯಿಸಬಹುದು ಎಂಬ ಹಲವು ಸ್ವ-ಅನುಭವಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.
ತನ್ನ ೧೫ ವರ್ಷಗಳ ಮಾನವ ಸಂಪನ್ಮೂಲ ಮೌಲ್ಯಮಾಪನ ಅನುಭವದಲ್ಲಿ ತಾವು ಕಂಡ ಹಲವಾರು ಕಾರ್ಪೊರೇಟ್ ಸಂಸ್ಥೆಗಳ ನಿರೀಕ್ಷೆಗಳೇನು? ಯಾವ ಯಾವ ಸಾಮರ್ಥ್ಯಗಳನ್ನು ಯಾವ ಯಾವ ಹಂತದಲ್ಲಿ, ಯಾವ ಪರಿಸ್ಥಿತಿಯಲ್ಲಿ ಹೇಗೆ ಉಪಯೋಗಿಸಿಕೊಳ್ಳಬೇಕೆಂಬ ಕಾರ್ಪೊರೇಟ್ ದಿಗ್ಗಜರ ಆಶಯಗಳ ಸೂಕ್ಷ್ಮ ಅವಲೋಕನವನ್ನು ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ. ಉದ್ಯೋಗಿಗಳಿಗೆ ತಾವು ನೀಡಿದ ಪ್ರತಿಕ್ರಿಯೆ, ಸಮಾಲೋಚನೆ ಮತ್ತು ನೀಡಿದ ವೈಯಕ್ತಿಕ ಅಭಿವೃದ್ಧಿ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಸಾಮರ್ಥ್ಯಗಳನ್ನು ವಿಶದೀಕರಿಸಿದ್ದಾರೆ. ಸಾಮರ್ಥ್ಯಗಳನ್ನು ಹೇಗೆ, ಯಾರೊಂದಿಗೆ, ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕೆಂಬ ವಿವೇಚನೆಗಾಗಿ ಭಾವನಾತ್ಮಕ ಬುದ್ಧಿವಂತಿಕೆಯ ವಿವರಣೆಯನ್ನೂ ನೀಡಿದ್ದಾರೆ.
ಒಟ್ಟಿನಲ್ಲಿ ಉದ್ಯೋಗಾಕಾಂಕ್ಷಿಗಳಿಗೆ, ಕಾರ್ಪೊರೇಟ್ ಸಂಸ್ಥೆ ಪ್ರವೇಶಿಸಲು, ಅಲ್ಲಿ ಪದೋನ್ನತಿ ಪಡೆಯಲು ಮತ್ತು ಉತ್ತುಂಗಕ್ಕೆ ಏರಲು ಈ ಕೈಪಿಡಿ ಅತ್ಯುತ್ತಮ ದಾರಿದೀವಿಗೆ ಎಂದರೆ ಅತಿಶಯೋಕ್ತಿಯೇನಲ್ಲ.
ಶ್ರೀ ಶ್ರೀಧರ ರಾವ್ ಅವರ ಶ್ರಮಕ್ಕೆ, ಯುವ ಪೀಳಿಗೆಯ ಬಗ್ಗೆ ಇರುವ ಕಾಳಜಿಗೆ, ಕಾರ್ಪೊರೇಟ್ ಜಗತ್ತಿನ ನಿರೀಕ್ಷೆಗಳನ್ನು ಫಲಪ್ರದವಾಗಲು ಅವರು ಕೈಗೊಂಡ ಈ ಮಹಾನ್ ಕಾರ್ಯಕ್ಕಾಗಿ, ಅವರಿಗೆ ನಾನು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಯುವ ಜನತೆಯ ಭವಿಷ್ಯತ್ತಿನ ಯಶಸ್ಸಿಗಾಗಿ, ಈ ಪುಸ್ತಕವನ್ನು ಓದಿ, ಲೇಖಕರ ಪರಿಶ್ರಮದ ಫಲವನ್ನು ಅನುಭವಿಸುವಂತಾಗಲಿ ಎಂದು ಹಾರೈಸುತ್ತೇನೆ.
ಶುಭ ಹಾರೈಕೆಗಳೊಂದಿಗೆ,
ಡಾ. ಎಲ್.ರವೀಂದ್ರನ್ B.Com (Hons)
PGDIM; Ph.D; CFP CM
MD and CEO Wealthmax Enterprises Management Private LTD.
Ex-president Bangalore Chamber of Industry and Commerce.
Member Bangalore International Centre.
ಪರಿವಿಡಿ
ಸವಿನುಡಿ / ೩
ಪುಸ್ತಕದ ಕುರಿತು ಎರಡು ಮಾತು… / ೫
ಲೇಖಕರ ನಿವೇದನೆ / ೮
೧. ಕಾರ್ಪೊರೇಟ್ ಜಗತ್ತು / ೧೧
೨. ಕಾರ್ಪೊರೇಟ್ ಉದ್ಯೋಗದಲ್ಲಿನ ನಿರೀಕ್ಷೆಗಳು / ೧೫
೩. ಸಂವಹನ (Communication) / ೨೪
೪. ಯೋಜನೆ ಮತ್ತು ಸಂಘಟನೆ (Planning and Organising) / ೩೦
೫. ವಿಶ್ಲೇಷಣಾತ್ಮಕ ಸಾಮರ್ಥ್ಯ (Analytical Ability) / ೩೬
೬. ವ್ಯಾವಹಾರಿಕ ಸಂಬಂಧ (Business Relationship) / ೪೨
೭. ಸಹಯೋಗ (Collaboration) / ೪೭
೮. ಪಾಲುದಾರಿಕೆಯ ಸೂಕ್ತ ಬಳಕೆ (Leveraging Partnership) / ೫೨
೯. ಅನುಷ್ಠಾನ ಶ್ರೇಷ್ಠತೆ (Execution Excellence) / ೫೬
೧೦. ಬದಲಾವಣೆ ನಿರ್ವಹಣೆ (Change Management) / ೬೧
೧೧. ಸಾಮರ್ಥ್ಯ ನಿರ್ಮಾಣ (Building Capability) / ೬೬
೧೨. ಗ್ರಾಹಕರ ಪರ ದೃಷ್ಟಿಕೋನ (Customer Orientation) / ೭೧
೧೩. ಮೇಲ್ವಿಚಾರಣೆ ಮತ್ತು ವಿಮರ್ಶೆ (Monitoring and Review) / ೭೬
೧೪. ಹೊಣೆಗಾರಿಕೆ ಮತ್ತು ಮಾಲೀಕತ್ವ (Accountability and Ownership) / ೭೯
೧೫. ಸಕ್ರಿಯ ಕಲಿಕೆ (Active Learning) / ೮೪
೧೬. ವ್ಯವಹಾರ ಕುಶಾಗ್ರಮತಿ (Business Acumen) / ೮೮
೧೭. ನಿರ್ವಹಣೆಯ ಪ್ರಮುಖ ಚಾಲಕಗಳು (Drivers of Management) / ೯೩
೧೮. ನಿರ್ಧಾರ ತೆಗೆದುಕೊಳ್ಳುವಿಕೆ (Decision Taking) / ೯೮
೧೯. ಫಲಿತಾಂಶಕ್ಕಾಗಿ ಪರಿಶ್ರಮ (Drive for Result) / ೧೦೩
೨೦. ನಾಯಕತ್ವ (Leadership) / ೧೦೯
೨೧. ಪ್ರಭಾವ (Influence)) / ೧೧೩
೨೨. ಕೆಲಸ ಮತ್ತು ಜೀವನದ ಸಮತೋಲನ (Work Life Balance) / ೧೧೬
೨೩. ಭಾವನಾತ್ಮಕ ಬುದ್ಧಿವಂತಿಕೆ (Emotional Intelligence)/ ೧೨೦
Reviews
There are no reviews yet.